ಇನ್ಯಾರು ನಿನ್ನ ಆಪ್ತರು (ಸಂಗ್ರಹ)
ಇನ್ಯಾರು ನಿನ್ನ ಆಪ್ತರು
ಕ್ರಿಸ್ತೇಸು ಒಬ್ಬನೇ ಸದಾ
ಸ್ವೀಕಾರಿಸು ಈ ಆಪ್ತನಾ
ಯೇಸು ನಿನ್ನಾಪ್ತ ರಕ್ಷಕಾ ।।
1. ನಿನ್ನಾಪ್ತ ಯೇಸು ಬಂದನು
ನಿಂಗಾಗಿ ಜಾತನಾದನು
ನಿನ್ನನ್ನು ಕೊಂಡುಕೊಂಡನು
ನೀನಲ್ಲ ಶಾಪಗ್ರಸ್ತನು
2. ಲೋಕಾ ವಿಹಾರದಾಪ್ತನು
ನಿನ್ನಾತ್ಮ ಶಾಂತಿ ನೀಡ್ವನು
ಹೃದವ ತಿಳಿದಾತನು
ಆತ್ಮದ ಆಪ್ತ ಕ್ರಿಸ್ತನು
3. ಮಹಿಮಾ ಸ್ಥಾನ ಬಯಸದೆ
ಪಾಪಿಯ ಸ್ಥಾನ ವಹಿಸಿದೆ
ನಮ್ಮೆಲ್ಲ ದ್ರೋಹ ಸಹಿಸುತ
ಪ್ರಾಣವ ಕೊಟ್ಟ ಆಪ್ತನೆ
2. ಇದುವೇ ಪ್ರಸನ್ನ ವೇಳೆಯೂ ರಕ್ಷಣಾ ದಿನವು (ಸಂಗ್ರಹ)
ಇದುವೇ ಪ್ರಸನ್ನ ವೇಳೆಯೂ ರಕ್ಷಣಾ ದಿನವು ಕೃಪಾಕಾಲವು ಇಂದೀಗಲೇ
1. ಪಾಪಿಯೇ ಮಾನಸಾಂತರಪಡು
ಪಾಪದ ಮಾರ್ಗ ತ್ಯಜಿಸಿಬಿಡು ।।
ಕ್ರಿಸ್ತನ ಹತ್ರ ಬಂದೀಗ
ಕ್ಷಮಾಪಣೆ ನೀ ಹೊಂದೀಗ
2. ಪಾಪದ ಭಾರ ಏಕೆ ಹೋರುತ್ತೀ
ತೀರ್ಪಿಗೆ ಏಕೆ ಗುರಿಯಾಗುತ್ತೀ ।।
ಶಿಲುಬೆ ತಾಳಿದ ಯೇಸುವನು
ನಂಬಿ ನೀ ಹೊಂದು ಜೀವವನು
3. ಒಂದೇ ಸಾರಿ ನೀ ಸಾಯುವುದೂ
ಆಮೇಲೆ ನ್ಯಾಯ ತೀರ್ಪಾಗ್ವದು ।।
ದೇವರ ನಿಜ ನೇಮಕವು
ತಪ್ಪಸಿಕೊಳ್ಳಲು ಅಸಾಧ್ಯವು
3. ಎನ್ನ ಹೃದಯ ಕಾದಿದೆ (ಸಂಗ್ರಹ)
ಎನ್ನ ಹೃದಯ ಕಾದಿದೆ
ದೇವಾ ನಿನ್ನ ಬಯಸಿದೆ
ನಿನ್ನ ನಾಗಲಿ ಬಾಡಿದೆ
ಜೀವ ನೀಡು ಬೇಡುವೆ.
ಬಾ.. ಯೇಸು ಬಾ.. (5)
1. ನೆಲೆಯ ಇಲ್ಲದ ಮನುಜಗೆ
ನೆರಳು ನೀನೇ ಆಗಿಹೆ
ಅಮರ ನೆಲೆಯ ತೋರಲು
ಬಾ ಎಂದು ಕರೆಯುವೆ .
2. ಹಸಿವೆಯಿಂದ ನರಳುವ
ಎನಗೆ ನೀನೆ ಆಸರೆ
ಅಮರ ತೃಪ್ತಿ ನೀಡಲು
ಬಾ ಎಂದು ಕರೆಯುವೆ.
4. ಮಹಿಮೆ ಮಹಿಮೆ ಸದಾ ಆತನಿಗೆ(ಸಂಗ್ರಹ)
ಮಹಿಮೆ ಮಹಿಮೆ ಸದಾ ಆತನಿಗೆಯೇಸು ರಾಜನಿಗೆಂದಿಗಾಗಲಿ
ರಕ್ಷಣಾನಂದವ ನೀಡಿದ ಕರ್ತನ
ಎಂದೆಂದೂ ಹಾಡಿ ಕೊಂಡಾಡುವೆವು.
ಪಲ್ಲವಿ
ಹಾ ಹ .. ಆನಂದವೇ ಪರಮಾನಂದವೇ
ಸ್ವರ್ಗದಾನಂದವೇ ಎಂದಿಗೂ
ಅತಿ ಘೋರವಾದ ಪಾಪದ ಬಂಧದಿ
ನಂನೆಂದಿಗೂ ಬಿಡಿಸಿದನು.
1. ಕುರುಡನಾಗಿದ್ದೆ ಕರುಣೆ ತೋರಿದಿ
ಪರಮಾಧೃಷ್ಠಿಯಾ ನೀಡಿದಿ
ಕರುಣಾ ಸಾಗರ ಪಾಪಿಯ ರಕ್ಷಿಸ
ಧರೆಗಿಳಿದು ನೀ ಬಂದವನೇ.
2. ಜೀವಮಾರ್ಗದೊಳು ಹೋಗುವೆ ಹೋಗುವೆ
ಯೇಸು ರಾಜನ ಹಿಂದೆ ಹೋಗುವೆ
ಭಾಗ್ಯ ಕಾನಾನಿಗೆ ಸೇರುವವರೆಗೆ
ಸದಾ ಆತನ ಹಿಂದೆ ಹೋಗುವೆ.
5. ನಾನು ನಿನ್ನ ದಾಸ ನಿನ್ನ ಸೇವೆಯ ಮಾಡುವೆ (ಸಂಗ್ರಹ)
ನಾನು ನಿನ್ನ ದಾಸ ನಿನ್ನ ಸೇವೆಯ ಮಾಡುವೆ
ಭೂಯಾತ್ರೆ ತೀರಲು ನಿನ್ ಬಳಿ ನಾ ಸೇರುವೆ..
1. ಮುಂದೆ ಮುಂದೆ ಸಾಗುವಾಗ ನಾನು
ಸಾಗಿಸುವ ಮಾರ್ಗದಲ್ಲಿ ನನ್ನ
ಶೋಧನೆ ಕಾಲದಲ್ಲಿಯೂ
ಕೈಹಿಡಿದು ನಡಿಸು ನನ್ನ
2. ಕಾದು ಕಾದು ನಾನಿಂದು
ನಿನ್ನ ಬೇಸತ್ತು ಹೋಗಿರುವಾಗ
ನಿನ್ನಯ ಮೊಗದ ದರ್ಶನವ
ತೋರು ನಿನ್ನ ಮಕ್ಕಳಿಗೆ
3. ಆಜ್ಞಾ ಆಜ್ಞಾ ಘೋಷದ ಶಬ್ದ
ನಾನಂದು ಕೇಳುತ್ತಿರಲು
ನಿನ್ ಸಮ್ಮುಖ ನಾನಂದು
ಆನಂದ ಘೋಷವನು
6. ಹಲ್ಲೆಲೂಯ ಸ್ತುತಿಮಾಡಿರಿ (ಸಂಗ್ರಹ)
ಹಲ್ಲೆಲೂಯ ಸ್ತುತಿಮಾಡಿರಿ
ಯೇಸುವಿಗೆ ಸ್ತುತಿಮಾಡಿರಿ
ಹಾ ಹಲ್ಲೆಲೂಯಾ ಹಲ್ಲೆಲೂಯಾ
1. ಶಿಲುಬೆಯ ಯಜ್ಞದಿ ನಿನ್ನ ರಕ್ತಾದಿ ಸುರಿಸಿದಿ
ಪಾಪ ನಿವಾರಿಸಿ ಶುದ್ಧೀ ಕರಿಸಿ ರಕ್ಷಣೆ ನೀಡಿದ್ದಿ
2. ನನ್ನ ಜೀವಿತದಿ ನಿನ್ನನ್ನೇ ಸ್ಮರಿಸುವೆನು
ನಿನ್ನಾತ್ಮ ಹೊಂದಿ ನಿನ್ನ ಚಿತ್ತ ಅರಿತು ಬಾಳುವೆ ನಾನಿಂದು
3. ಯೇಸುವ ನಂಬಿರಿ ನಿಜ ರಕ್ಷಣೆ ಹೊಂದಿರಿ
ನಿತ್ಯಭಾಗ್ಯವ ಪಡೆಯಿರಿ ಎಂಬ ವಾರ್ತೆಯ ಸಾರುವೆವು
7. ಯೇಸು ಪ್ರೀತಿಸುತ್ತಾನೆ (ಸಂಗ್ರಹ)
ಯೇಸು ಪ್ರೀತಿಸುತ್ತಾನೆ
ನಿನ್ನನ್ನು ಪ್ರೀತಿಸುತ್ತಾನೆ ನಿನಗಾಗಿಯೇ ಸ್ವಪ್ರಾಣವ
ಅರ್ಪಿಸಿ ನಿನ್ನನ್ನು ಪ್ರೀತಿಸುತ್ತಾನೆ.
ಯೇಸು ಪ್ರೀತಿಸುತ್ತಾನೆ
1. ನಿನ್ನ ಸಮಸ್ಯೆ ಏನಿದ್ದರೂ
ಚಿಂತೆಯಲ್ಲಿಯೇ ಮುಳುಗಿದ್ದರು
ಯೇಸುವು ನಿನಗೆ ವಿಶೇಷ
ಪರಿಹಾನ ಮಾಡುವನು
2. ನಿನ್ನಲ್ಲಿ ಅನೇಕ ಕಷ್ಟಗಳೂ
ಸಹಿಸಿಕೊಳ್ಳದ ದುಃಖಗಳೂ
ಕರ್ತನು ನಿನಗೆ ಅಪಾರ
ಸಹಾಯ ಮಾಡುವನು
ಯೇಸು ಪ್ರೀತಿಸುತ್ತಾನೆ.
3. ನಿನ್ನ ಪಾಪ ಎಷ್ಟಿದ್ದರೂ
ಅಪರಾಧದಿಂದ ತುಂಬಿದ್ದರೂ
ಪ್ರಭುವು ನಿನ್ನನ್ನು ಮನ್ನಿಸಿ
ನೂತನ ಪಡಿಸುತವನು
ಯೇಸು ಪ್ರೀತಿಸುತ್ತಾನೆ.
8. ನಿನ್ನ ಭೂಯಾತ್ರೆಯ ಚಿಂತೆಯನ್ನು(ಸಂಗ್ರಹ)
ನಿನ್ನ ಭೂಯಾತ್ರೆಯ ಚಿಂತೆಯನ್ನು
ಕರ್ತಗೊಪ್ಪಿಸಿ ನಿಷಿನಂತನಾಗಿರು
ಭಯವು ಏತಕೆ ಸಂದೇಹ ವೇತಕೆ
ಕರ್ತನನಿರುವಲ್ಲಿ ಚಿಂತೆಯೇತಕೆ
1. ಯೇಸುವಿನೊಡನೆ ಮುಂದೆ ಸಾಗುನೀ
ಸಂದೇಹಪಡದೆ ಆತನ ನಂಬುನೀ
ಬೆಟ್ಟದಂತೆ ಕಷ್ಟ ಬಂದರು
ಯೇಸು ಇರುವನು
ನೀನೇಸುವ ನೋಡು
2. ನಿನಗಾದ ಸ್ಥಿತಿಗೆ ಬೆರಗಾಗುತ್ತಿದ್ದರೂ
ಕಣ್ಣೀರ ಕಾಲುವೆ ನೀ ದಾಟುತಿದ್ದರೂ
ನಿನ್ನ ಮೇಲೆ ಮಮತೆ ಇರುವ
ಯೇಸು ಇರುವನು
ಈ ಯೇಸುವ ನೋಡು
3 .ನಿನ್ನಾಯ ಹಿತಕ್ಕ್ಕೆ ಎಲ್ಲವು ಅಗ್ವಾದು
ಯೇಸುವಿನ ರೂಪಕ್ಕೆ ರೂಪಿತಾನಾಗಲು
ಶಿಲ್ಪಿಯಾದ ದೇವರು
ರೂಪಿಸುತ್ತಿರುವನು
ಈತನ ಪ್ರೀತಿಸು
ಭಯವು ಏತಕೆ ಸಂದೇಹ ವೇತಕೆ
ಕರ್ತನನಿರುವಲ್ಲಿ ಚಿಂತೆಯೇತಕೆ
1. ಯೇಸುವಿನೊಡನೆ ಮುಂದೆ ಸಾಗುನೀ
ಸಂದೇಹಪಡದೆ ಆತನ ನಂಬುನೀ
ಬೆಟ್ಟದಂತೆ ಕಷ್ಟ ಬಂದರು
ಯೇಸು ಇರುವನು
ನೀನೇಸುವ ನೋಡು
2. ನಿನಗಾದ ಸ್ಥಿತಿಗೆ ಬೆರಗಾಗುತ್ತಿದ್ದರೂ
ಕಣ್ಣೀರ ಕಾಲುವೆ ನೀ ದಾಟುತಿದ್ದರೂ
ನಿನ್ನ ಮೇಲೆ ಮಮತೆ ಇರುವ
ಯೇಸು ಇರುವನು
ಈ ಯೇಸುವ ನೋಡು
3 .ನಿನ್ನಾಯ ಹಿತಕ್ಕ್ಕೆ ಎಲ್ಲವು ಅಗ್ವಾದು
ಯೇಸುವಿನ ರೂಪಕ್ಕೆ ರೂಪಿತಾನಾಗಲು
ಶಿಲ್ಪಿಯಾದ ದೇವರು
ರೂಪಿಸುತ್ತಿರುವನು
ಈತನ ಪ್ರೀತಿಸು
9. ನಮ್ಮರಾಧನ ನಮ್ಮಯ ಪ್ರಾರ್ಥನಾ (ಸಂಗ್ರಹ)
ನಮ್ಮರಾಧನ ನಮ್ಮಯ ಪ್ರಾರ್ಥನಾಶರಣಾನೇ ನಿನಗರ್ಪಣಾ ದೇವಾ
ಜಗದೀಶನೇ ನಮನಾ
1. ನೋವಿಗೆ ಕುಗ್ಗದೆ ನಲಿವಿಗೆ ಹಿಗ್ಗದೇ
ಸ್ಥಿರ ಚಿತ್ತ ನೀಡು ಚಂಚಲ ಮನಕೆ
ಹರಿಯುವ ಚಿತ್ತವ ಏಕಾಗ್ರ ಗೊಳಿಸು
ನಿರ್ಮಲ ಮನ ನಿರ್ಮಿಸು
2. ನಾನು ನನಗೆಂಬ ಅಳಿವು ಆಳಿಸು
ಮೇಲು ಕೀ ಳೆಂಬ ಬೇಧವ ಧಮನಿಸು
ಮನುಜ ಮನುಜರಲ್ಲಿ ಮೈತ್ರಿಯಾ ಬೆಳೆಸು
ಎಲ್ಲರ ಒಂದಾಗಿಸು.
10 ನನ್ನ ದೀಪಕ್ಕೆ ಎಣ್ಣೆಯ ಕೊಡು (ಸಂಗ್ರಹ)
ನನ್ನ ದೀಪಕ್ಕೆ ಎಣ್ಣೆಯ ಕೊಡು ಪ್ರಿಯ ಕರ್ತನೇ ಬೇಡುವೆ
ನಿನ್ನ ಆತ್ಮದ ಎಣ್ಣೆಯ ನೀಡು
ಉರಿಯಲು ನಿನಗಾಗಿಯೇ
ಹೊಸಿಯನ್ನ ಹೊಸಿಯನ್ನ
ರಾಜಾದಿ ರಾಜಕೀ ಹಾಡಿರಿ !
ಕರ್ತಾದಿ ಕರ್ತಗೆ ಹಾಡಿರಿ.
11 ನಿನ್ನ ಪ್ರೀತಿ ಎಷ್ಟೋ ಅಪಾರವೇ (ಸಂಗ್ರಹ)
ನಿನ್ನ ಪ್ರೀತಿ ಎಷ್ಟೋ ಅಪಾರವೇ ವರ್ಣಿಸಲಸದಳ ವಾಗಿದೆ
ಅದರಂತರಾಳವನ್ನರಿಯಲು
ಈ ಅಲ್ಪ ಬುದ್ಧಿ ಸಾಲದು
1. ನನ್ನನ್ನು ನೀನು ಪ್ರೀತಿಸಿದ್ದು ಶಾಶ್ವತ ಪ್ರೇಮದಿ
ಪ್ರೀತಿ ಕರುಣೆಯಿಂದಲೇ ನನ್ನನು ಸೆಳೆದಿ
ನಿನ್ನನ್ನೆಷ್ಟು ಸ್ತುತಿಸಿದರು ಇನ್ನು ಸಾಲದು
ಇನ್ನು ಸಾಲದು
2. ನೀನಿಲ್ಲದಿರುತ್ತಿದ್ದರೆ ನನಗಿಲ್ಲ ನಿರೀಕ್ಷೆಯು
ಲೋಕವು ನನ್ನನ್ನೆಷ್ಟಾಗಿ ಹಗೆ ಮಾಡುತ್ತಿದ್ದರೂ
ನಿನ್ನ ಪ್ರೀತಿ ಕೃಪೆಗಳೇ ನನ್ನಾಯ ಬಲವು
ನನ್ನಯ ಬಲವು
3. ನಿನ್ನಲ್ಲಿ ನನಗೆ ಸಂತೃಪ್ತಿಯು ಹೃದಕ್ಕೆ ನೆಮ್ಮದಿಯು
ಸಂತೋಷ ಕಷ್ಟಗಳಲ್ಲಿಯೂ ನಿನ್ ಚಿತ್ತ ಮಾಡಲು
ಕಲಿಸು ಪ್ರಾರ್ಥಿಸಿ ಕೊಂಡಾಡಲು ನಿನ್ನಯ ಪ್ರೀತಿಯ
ನಿನ್ನಾಯ ಪ್ರೀತಿಯ
12 ಕಡಲ ಮೇಲೆ ಕಡಲ ಮೇಲೆ (ಸಂಗ್ರಹ)
ಕಡಲ ಮೇಲೆ ಕಡಲ ಮೇಲೆ ನಾನು ಯಾತ್ರೆ ಮಾಡುವೆ
ಯೇಸು ಸ್ವಾಮಿ ಯೇಸು ಸ್ವಾಮಿ
ನಾವೆಯ ನಾಯಕ
ಮೇಲಿಂದ ಮೇಲೆ
ಮೇಲಿಂದ ಮೇಲೆ
ದೊಡ್ಡ ತೆರೆ ಯಂತೆಯೇ
ಸುರಿಸುತ್ತಾನೆ ಸುರಿಸುತ್ತಾನೆ
ಕ್ರಿಸ್ತನು ಪ್ರೀತಿಯು
13 ಎಲ್ಲಾ ಕಾಲದೊಳು ಸಂಗ್ರಹ)
ಎಲ್ಲಾ ಕಾಲದೊಳು
ಎಲ್ಲಾ ವೇಳೆಯೊಳು
ಯೇಸುವೇ ನಿನ್ನನ್ನೇ ಸ್ತುತಿಪೆ
ರಕ್ಷಕಾ ನಿನ್ನನೇ ಸ್ತುತಿಪೆ
ಸ್ತುತಿಪೆಎಲ್ಲ ವೇಳೆಯೊಳು ಸ್ತುತಿಪೆ
1. ಆದಿಯೂ ನೀನೇ ಅಂತ್ಯವು ನೀನೇ
ಜ್ಯೋತಿಯು ನೀನೇ ನನ್ನ ಭಾಗ್ಯವು ನೀನೆ
2. ತಂದೆಯು ನೀನೇ ತಾಯಿಯು ನೀನೇ
ಬಂಧುವು ನೀನೇ ನನ್ನ ಎಲ್ಲವು ನೀನೇ
3. ಮಾರ್ಗವು ನೀನೇ ಸತ್ಯವೂ ನೀನೇ
ಜ್ಯೋತಿಯು ನೀನೇ ನನ್ನ ಜೀವವೂ ನೀನೇ
4. ಸಹಾಯವು ನೀನೇ ಸಂತೋಷವು ನೀನೇ
ಶಾಂತಿಯು ನೀನೇ ವಿಶ್ರಾಂತಿಯೂ ನೀನೇ
No comments:
Post a Comment